Karnataka politics drama: Series of MLAs of Congress resigning, two more members resigned on July 10th. There are some MLAs are closely associated with former CM and CLP leader Siddaramaiah. Who is behind of this political drama in Karnataka.
'ಶಾಸಕರ ಸರಣಿ ರಾಜೀನಾಮೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದು ನನಗೆ ಗೊತ್ತಿದೆ. ಮೈತ್ರಿ ಸರಕಾರ ಕೆಡವಲು ಉದ್ದೇಶಪೂರ್ವಕವಾಗಿಯೇ ಶಾಸಕರನ್ನು ಮುಂದೆ ಬಿಡಲಾಗಿದೆ. ಇದರ ಹಿಂದೆ ಕಾಂಗ್ರೆಸ್ ಮುಖಂಡರ ಕೈವಾಡವಿದೆ' ಇದು ಕೆಲವು ದಿನಗಳ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡರು ನೀಡಿದ್ದ ಹೇಳಿಕೆ. ರಾಜಕಾರಣವನ್ನು ಅರಿದು ಕುಡಿದು ಆಪೋಸನ ಮಾಡಿಕೊಂಡಿರುವ ಗೌಡ್ರ ಲೆಕ್ಕಾಚಾರ ತಪ್ಪಾಗುತ್ತಾ? ಹಾಗಿದ್ದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಅಷ್ಟು ಪ್ರಬಲರಾಗಿರುವ ಮುಖಂಡರು ಯಾರು? ಸೈಲೆಂಟಾಗಿ ಪರದೆಯ ಹಿಂದೆ ಆಟವಾಡುತ್ತಿರುವವರು ಯಾರು ಎಂದಾಗ ಸಂಶಯದ ಕಣ್ಣು ಸಿದ್ದರಾಮಯ್ಯನವರ ಕಡೆ ತಿರುಗುವುದು ಸಹಜ.